Skip to main content

Home Theatre 2, Author's Words


Keshava Malagi
ಚಿತ್ರರಂಗ, ರಂಗಭೂಮಿ, ಪಾಕಶಾಸ್ತ್ರ, ಸಂಘಟನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಪಿ.ಡಿ. ಸತೀಶ ಚಂದ್ರರ ಹೋಮ್‌ ಥಿಯೇಟರ್‌ ಅತ್ಯಂತ ನವೀನ ಪರಿಕಲ್ಪನೆ. ತಂತ್ರಜ್ಞಾನವನ್ನು ಬಳಸಿ ಹೊಸ ಹೊಸ ಪರಿಕರಗಳು ಮಾರುಕಟ್ಟೆಗೆ ಬಂದತೆಲ್ಲ ಹೊಸ ಉಪಕ್ರಮಗಳ ಮೈದಾಳುವುದು ಸಹಜ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಪರಿಶ್ರಮ ಹಾಗೂ ಮಹತ್ವಾಕಾಂಕ್ಷೆಯಿಂದ ಘನವಾದುದನ್ನು ಸಾಧಿಸಿದವರು, ಆ ನಿಟ್ಟಿನಲ್ಲಿ ಹೆಜ್ಜೆಯಿಕ್ಕುತ್ತಿರುವ ಪ್ರತಿಭಾವಂತರು ಕಾದಂಬರಿಯೊಂದನ್ನು ಸರಣಿಯಲಿ ಓದುವುದು ಕನ್ನಡಕ್ಕಂತೂ ತೀರ ಹೊಸ ವಿಚಾರ. ಪಾಶ್ಚಾತ್ಯಲೋಕದಲ್ಲಿ ಬೇರೆ ಬೇರೆ ಬಗೆಯ ’ಆಲಿಕೆ ಹೊತ್ತಿಗೆ’ (ಆಡಿಯೋ ಬುಕ್‌) ಗಳಿರುವುದನ್ನು ನಾವು ಬಲ್ಲೆವು. ಆದರೆ, ಸತೀಶ ಚಂದ್ರರ ಹೋಮ್‌ ಥಿಯೇಟರ್‌ನಲ್ಲಿ ಒಂದೇ ಕಾದಂಬರಿಯನ್ನು ಹತ್ತಾರು ಪರಿಣಿತರು ಓದುವುದು, ಹೊಸ ಪರಿಣಾಮ ಸೃಷ್ಟಿಸುವುದು ಅಚ್ಚರಿಯ, ಶ್ಲಾಘನೀಯ ವಿಷಯ.
Book Cover

ಈ ಬಗೆಯ ಓದು ಕೇಳುಗನಲ್ಲಿ ಹೊಸ ಪರಿಣಾಮ ಬೀರುವುದನ್ನು ಖಂಡಿತ. ’ಕೇಳು ಪುಸ್ತಕ’ದ ಈ ಹೊಸ ಮಾದರಿ ಕನ್ನಡದ ಭವಿಷ್ಯದ ಓದನ್ನು ತನ್ನದೇ ಅರ್ಥದಲ್ಲಿ ತುಸುವಾದರೂ ಹಿಗ್ಗಿಸಲಿದೆ. ಹೊಸ ಉಪಕ್ರಮಗಳನ್ನು ಕೈಗೊಂಡಾಗ ಬೇಕಾಗುವ ಪರಿಶ್ರಮ, ತಾಳ್ಮೆ ಮತ್ತು ಸಂಘಟನಾ ಚತುರತೆ ಅಪಾರ. ಸತೀಶ ಚಂದ್ರರ ಯಶಸ್ವಿ ಪ್ರಯೋಗಗಳನ್ನು ಗಮನಿಸಿದರೆ ಅವರು ಅದರಲ್ಲಿ ಸಿದ್ಧಹಸ್ತರೆಂಬುದು ಅರಿವಾಗುವುದು. ಅವರ ಜಾಲತಾಣ: http://www.prakasamtrust.org/ht ಕೂಡ ಅನೇಕ ಮಾಹಿತಿಗಳ ಕಣಜ.

ಈಗಾಗಲೇ ತಮ್ಮ ಕೆಲಸದ ಮೂಲಕ ಸಹೃದಯರನ್ನು ತಲುಪುತ್ತಿರುವ ಸತೀಶ ಚಂದ್ರರ ಪ್ರಯತ್ನಗಳಿಗೆ ಯಶವಂತೂ ಸಿಕ್ಕೇ ಸಿಕ್ಕುವುದು. ನಾವು ಹೇಳಬಹುದಾದುದು ’ಶುಭ ಹಾರೈಕೆ’.

Comments

Popular posts from this blog

ಸಂವಿ ಹೇಳಿಕೊಟ್ಟ ಪಾಠಗಳು | Tribute to Sanchari Vijay

ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ. ಸಂವಿ ಹೇಳಿಕೊಟ್ಟ ಪಾಠಗಳು ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ.  ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ.  ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ...

I The Revenant!! (I live to tell the tale)

I really have no idea what to title this, tryst with destiny, final minutes, death at doorstep, light after darkness, reincarnation, second life, how I cheated death, My Life = 1300 Rs, I The Revenant, Sea rescue... But I am sure why I am writing this, I do not want to forget anything which happened on this day. It was early hours of Sunday, December 18, 2016, day after we had Mahpeede Mahablu show in Baindur.  We wanted to go to the beach till sun rises, come back get ready and leave to Bangalore at any cost before 10 AM after breakfast at 9 AM.  So we slept late, since we were in the same beach till 11 PM.  We went in at around 6.30 AM and tried to get into the sea at point 2 in the image below.  Later we realised that the current here is too much of the Sumana or Baindur river, force of the river was enough to make the sea water less salty.  This is clear sign that the current is super strong.  Looking for a suitable location, we moved to location...

Readers in Home Theatre 1

ಹೋಮ್ ಥೀಯೇಟರ್ ಒಂದನೇ ಪುಸ್ತಕದ ಅಧ್ಯಾಯಗಳು ಮತ್ತು ಅದನ್ನು ಓದಿದವರು. ಎಲ್ಲರಿಗೂ ನಮ್ಮ ಧನ್ಯವಾದಗಳು. Video Index: 1 ಜೋಗಿ - ದಯವಿಟ್ಟು ಈ ಪುಸ್ತಕ ಓದಬೇಡಿ - 0:12 2 ಟಿಏನ್ ಸೀತಾರಾಮ್ - ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ - 3:26 3 ಭಾವನಾ - ಒಂದು ಪ್ರೇಮದ ಕಥೆ - 7:14 4 ರಿಷಬ್ ಶೆಟ್ಟಿ - ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? - 11:09 5 ಸುಮನ್ ನಗರ್ಕರ್ - ಲೈಫ್ಒಂದು ಪಾಸ್‍ವರ್ಡು - 13:21 6 ರಿಷಿ - ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ - 16:28 7 ರಾಧಿಕಾ ನಾರಾಯಣ್ - ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? - 19:54 8 ವಸಿಷ್ಠ ಸಿಂಹ - ಲ್ಯಾಪ್ಟಾಪ್ ಮತ್ತು ಪ್ರೀತಿ! - 21:54 9 ಹರ್ಷಿಕಾ ಪೂಣಚ್ಚ - ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! - 23:47 10 ಪ್ರಮೋದ್ ಶೆಟ್ಟಿ - ಎಲ್ಲಾ ಮರೆತು ಚಪ್ಪಾಳೆ ತಟ್ಟಿ - 26:11 11 ಸಂಯುಕ್ತ ಹೊರನಾಡ್ - ಸೀಟ್ ಫಿಲಾಸಫಿ - 29:08 12 ಸಿಹಿ ಕಹಿ ಚಂದ್ರು - ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ - 31:48 13 ಮಂಡ್ಯ ರಮೇಶ್ - ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! - 41:58 14 ರಾಜೇಂದ್ರ ಕಾರಂತ - ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? - 45:08 15 ಸಂಚಾರಿ ವಿಜಯ್ - ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ...