ಡಾ ರಾಜಕುಮಾರ್, ಜಿ ಕೆ ವೆಂಕಟೇಶ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ನೆನ್ನೆ WhatsAppಗೆ ಸನಾದಿ ಅಪ್ಪಣ್ಣ ಚಿತ್ರದ ಒಂದು ತುಣುಕಿಗೆ IPL ಟ್ಯೂನ್ ಹಾಕಿ ಒಂದು ವಿಡಿಯೋ ಬಂದಿತ್ತು. ಚೆನ್ನಾಗೇ match ಆಗಿತ್ತು, ನಕ್ಕು ಅದನ್ನ ನನ್ನ status ಮಾಡಿ ಕೂಡ ಹಾಕಿದೆ. ಸನಾದಿ ಅಪ್ಪಣ್ಣ ಒಂದು ಕಾಲಾತೀತ ಚಲನಚಿತ್ರ, ವಿಜಯ್ ಅವರ ನಿರ್ದೇಶನ, ಅಣ್ಣಾವ್ರ ಅಭಿನಯ ಇದೆಲ್ಲಾದಕ್ಕೂ ಮೀರಿ ಒಂದು ಇಡೀ ವರ್ಷ ಈ ಚಿತ್ರ ಓಡೋದಕ್ಕೆ ಕಾರಣ ನಮ್ಮ GKV ಸಂಗೀತ ಮತ್ತು ಅವರ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶೆಹನಾಯಿ ಮೋಡಿ. ಹಾಸು ಹೊಕ್ಕಾಗಿ ಬೇಹಾಗ್, ಮಾರ್ವೆ, ಸಿಂಧುಭೈರವಿ ಕನ್ನಡ ನುಡಿಯೊಂದಿಗೆ ಹೊಂದಿಕೆಯಾಗಿ ಹೊರಬಂದ masterpiece ಸಂಗೀತ ಹೊಂದಿದ್ದು. ರಾಜಣ್ಣ ಸುಮಾರು ಒಂದು ತಿಂಗಳು ಬೇರೆ ಶೂಟಿಂಗ್ ಬಿಟ್ಟು ಶೆಹನಾಯಿ ನುಡಿಸೋದು ಹೇಗೆ ಎಂದು ಉಸ್ತಾದ್ ಬಿಸ್ಮಿಲ್ಲಾ ಖಾನ್ ಜೊತೆ ಕಾಲ ಕಳೆದರಂತೆ, ಖಾನ್ ರವರು ಪ್ರಸಾದ್ ಸ್ಟುಡಿಯೋನಲ್ಲಿ ಒಂಬತ್ತು ದಿನ ರೆಕಾರ್ಡಿಂಗ್ ಮಾಡೋವಾಗ ಅಣ್ಣಾವ್ರು ಮುಗ್ಧ ಬಾಲಕನಂತೆ ಅವರ ರೆಕಾರ್ಡಿಂಗ್ ಕೇಳುತ್ತಾ ನಿಲ್ಲುತ್ತಿದ್ದರಂತೆ. 1977ರಲ್ಲಿ ಒಂದು ಚಿತ್ರಕ್ಕೆ ಇಷ್ಟು ಕೆಲಸ ನಡೆಯುತ್ತಿತ್ತು. ಇದು ಬರಿ ಸಂಗೀತದ department, ಅಣ್ಣಾವ್ರ preparation ಹೊಗಳುತ್ತಾ ಚಿತ್ರ ನೋಡಿದ ಖಾನ್ ನೀವೇ ನುಡಿಸುತ್ತಾ ಇರೋದು ಅಂತ ನನಗೂ ಅನ್ನಿಸಿತು ಎಂದರಂತೆ. ತಮಿಳಿನ ತಿಲ್ಲಾನ ಮೋಹನಾನೆಂಬಾಳ್ ಎಂಬ ಚಿತ್ರದಲ್ಲಿ ಶಿವ...