ಕನ್ನಡ ಉಳಿಸಲು ಕನ್ನಡ ಬಳಸಿ, ಇದು ನಾನು ನನ್ನ ಎಲ್ಲಾ ಕನ್ನಡ ಬಂಧು ಬಾಂಧವರಿಗೆ ಯಾವಾಗಲೂ ಹೇಳುವ ಡೈಲಾಗ್. ನನ್ನ ಹಾಗು ಕನ್ನಡದ ಸಣ್ಣ ಕಥೆ ಇಲ್ಲಿದೆ... ಓದಿ ಹೇಳಿ ಹೇಗಿದೆ... (ಹೇಗಿದೆ ಪ್ರಾಸ) ನಮ್ಮಲ್ಲಿ ಭಾಷೆಗಳು ಹಲವು ಆದರೂ ಭಾರತೀಯತೆ ಎಲ್ಲವನ್ನೂ ಮೆಟ್ಟಿನಿಲ್ಲುವಂತೆ “ಯೂನಿಟಿ ಇನ್ ಡೈವರ್ಸಿಟಿ” ನಮ್ಮ ಸುತ್ತ ಮುತ್ತಲಿನ ಭಾಷೆಗಳನ್ನು ನಮಗೆ ಕಲಿಸುತ್ತವೆ. ಮನುಷ್ಯನು ಒಬ್ಬ ಸಂಘಜೀವಿ, ಅವನ ಈ ಸಂಘಜೀವನದ ಆಸೆಯು ಅವನನ್ನು ಮೂಕೀ ಭಾಷೆಯಿಂದ ಮಾತನಾಡುವ ಭಾಷೆಯತ್ತ ತಂದು ನಿಲ್ಲಿಸಿದೆ. ಸಂವಹನದ ಕೊಂಡಿಯಾಗಿರುವ ಈ ಭಾಷೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿದೆ. ಭಾಷೆ ಏನಾದರೂ ಇರಲಿ ಮಾತಾಡದೇ ಯಾರೂ ಬದುಕಿರುಲು ಅಸಾಧ್ಯವಾಗಿರುವಾಗ ನಮ್ಮ ದೇಶದಂಥಹ ವಿಭಿನ್ನ ಭಾಷೆಗಳ ಸಮಾಗಮದ ಸಮಾಜದಲ್ಲಿ ತಿಳಿಯದ ಭಾಷೆಯವರ ಜೊತೆಯೂ ಹೇಗಾದರೂ ಮಾತನಾಡುವ ತವಕವಿರುತ್ತದೆ. ನಾನು ಮೊದಲಬಾರಿಗೆ ಬೆಂಗಳೂರನ್ನು ಬಿಟ್ಟು ಬೇರೇ ರಾಜ್ಯಕ್ಕೆ ಹೋಗಿದ್ದೆಂದರೆ ಅದು ಕೇರಳಾಗೆ, ನಮ್ಮ ದೊಡ್ಡಪ್ಪ ಅಲ್ಲಿನ ಇಸ್ರೋ ಕೇಂದ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಅಲ್ಲಿ ನನಗೆ ಮೊದಲಬಾರಿ ಒಂದು ಏಲಿಯನ್ ಅನುಭವವಾಯ್ತು. ನನಗಾಗ ಏಳು ವರ್ಷ, ಪ್ರಪಂಚದಲ್ಲಿ ಇಂಗ್ಲಿಷ್ ನಮ್ಮ ದೇಶದಲ್ಲಿ ಹಿಂದಿ ಬಿಟ್ಟರೆ ಕನ್ನಡವೊಂದೇ ಭಾಷೆ ಎಂದು ನಂಬಿದ್ದ ಕನ್ನಡಾ ಮೀಡಿಯಂ ವಿಧ್ಯಾರ್ಥಿಗೆ ದೊಡ್ಡ ಆಘಾತವಾಯ್ತು. ಇಂಗ್ಲಿ...