ಇದು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದಿರುವ ಮೊಟ್ಟ ಮೊದಲ ವಿಡಿಯೋ ಬುಕ್!! ವಿಡಿಯೋ ಬುಕ್ ಮಾಡಲು ರೆಡಿ ಇದ್ದರೆ ನನಗೆ ತಿಳಿಸಿ....
ಕರೋನ ಗಲಾಟೆಯಿಂದ ನಾವೆಲ್ಲಾ ಹೋಲ್ ಸೇಲ್ ಆಗಿ ಮನೆ ಸೇರಿದ್ದು ಈಗಾಗಲೇ ಹಳೇ ಸುದ್ದಿ. ಸೇರಿದಾಗ ಏನು ಮಾಡುವುದು, ದಿನಾ ಇಡೀ ಊರು ಸುತ್ತುತಿದ್ದ ನನ್ನ ತರದವರಿಗೆ ದೊಡ್ಡ ಶಾಪ ಆಯ್ತು ಈ ಲಾಕ್ ಡೌನ್ ಸುದ್ದಿ. ಮಾಡಬೇಕಾದ ಎರಡೂ ನಾಟಕಗಳು ಕ್ಯಾನ್ಸಲ್ ಆಯ್ತು. ಮಾರ್ಚ್ ೨೨ನೇ ತಾರೀಕು ನಾಟಕ ಕ್ಯಾನ್ಸಲ್ ಆದಮೇಲೆ ಏನಾದರೂ ಮಾಡಬೇಕು, ಮನೆಯಲ್ಲಿ ಕುಳಿತು ಜಡಭರತನಾಗುವುದು ನನಗಂತೂ ಇಷ್ಟ ಇರಲಿಲ್ಲ. ಆದರೆ ಇದು ಸಮಾಜಕ್ಕೆ ಸಮಾಜದಿಂದ ಹರಡೋ ವೈರಸ್. ಮನೆಯಲ್ಲಿ ಕುಳಿತು ಏನು ಮಾಡೋಣ ಅಂತ ಯೋಚನೆ ಮಾಡುತ್ತಿದ್ದಾಗ couch potato ಅನ್ನೋ ಒಂದು ಪರಿಕಲ್ಪನೆ ಆಧಾರಿತ ಐಡಿಯಾ ಬಂತು.
ಕಲಾವಿದರು ಸ್ನೇಹಿತರಾದಾಗ ಈ ತರಹದ ಕೆಲಸಕ್ಕೆ ಸಿಕ್ಕಾಪಟ್ಟೆ ಅನುಕೂಲ ಆಗುತ್ತೆ. ಎಲ್ಲರೂ ಒಟ್ಟಿಗೆ ಕುಳಿತು ಒಂದೊಂದು ಕಥೆ ಓದಿ ಒಂದು ದೊಡ್ಡ ವಿಡಿಯೋ ಮಾಡೋಣ ಅಂತ ಮನಸಾಯಿತು. ಓದುವುದರ ವಿಡಿಯೋ ಮಾಡಿ ಅದನ್ನು ಎಡಿಟ್ ಮಾಡಿ ಒಂದು ದೊಡ್ಡ ವಿಡಿಯೋ ಮಾಡೋಣ ಅಂತ ನಿರ್ಧರಿಸಿದೆ. ನಂತರದ ಪ್ರಶ್ನೆ ಯಾವ ಪುಸ್ತಕ ಓದುವುದು ಎನ್ನೋದು. ಸಡನ್ನಾಗಿ ಜ್ಞಾಪಕ ಬಂದದ್ದು ಜೋಗಿಯವರ ಲೈಫ್ ಈಸ್ ಬ್ಯೂಟಿಫುಲ್, ನನ್ನ ನಟನಾ ಕಾರ್ಯಾಗಾರಕ್ಕೆ ಈಗಾಗಲೇ ಅದನ್ನು ಬಳಸಿದ್ದರಿಂದ ಅದರಲ್ಲಿದ್ದ ಸಣ್ಣ ಸಣ್ಣ ಯೋಚನೆಗಳ ಹಾಗು ಈಗಿನ ಕಾಲಕ್ಕೆ ತಕ್ಕ ಬರಹ ಆಪ್ಯಾಯವೆನಿಸಿತು.
ಸಾಕಷ್ಟು ಮುಜುಗರದಿಂದಲೇ (ಏನು ಕೇಳಿದರು ಇಲ್ಲ ಅನ್ನೊಲ್ಲ ಅದಕ್ಕೆ) ಜೋಗಿಯವರ ಬಳಿ ವಿಷಯ ಪ್ರಸ್ತಾಪ ಮಾಡಿದೆ. ಅವರು ಹಿಂದೆ ಮುಂದೆ ನೋಡದೆ ಮಾಡಿ ಅದ್ಭುತವಾದ ಯೋಚನೆ ಎಂದು ಹುರಿದುಂಬಿಸಿ ಈ ಪೋಸ್ಟರ್ ಮಾಡಿ ಕೊಟ್ಟರು. ನಾನು ಮಾಡಿದ ಕೆಟ್ಟ ಪೋಸ್ಟರ್ ನೋಡಲು ಇಲ್ಲಿ click ಮಾಡಿ
ಹಾಗೆ ಕೆಲಸ ಶುರು ಆದ ತಕ್ಷಣ ಒಂದು ಲೈವ್ ಕೂಡ ಮಾಡಿದೀವಿ. (ಲೈವ್ ವಿಡಿಯೋ ನೋಡಲು ಇಲ್ಲಿ click ಮಾಡಿ) ಬರೋಬರಿ 51 ಜನರನ್ನು ಪಟ್ಟಿ ಮಾಡಿ ಕಲೆ ಹಾಕಿ ಅವರಿಗೆ ಒಂದೊಂದೇ ಕಥೆಯನ್ನು ಕಲಿಸಲು ಆರಂಭಿಸಿದೇ. ಜೋಗಿಯವರ ಮುಖಾಂತರ ಪ್ರತಿ ಕಥೆಯು pdf ಆಗಿ ನನಗೆ ಸಿಕ್ಕಿತು (ಜಮೀಲ್ ರವರಿಗೆ ಧನ್ಯವಾದಗಳು). ಈಗ ಇದು ಇನ್ನೇನು ಮುಗಿದು ಹೊರಬರಲು ತಾಯಾರಿದೆ, ಹಾಗೆ ಎರಡನೇ ಅವತರಿಣಿಕೆಗೆ ಪೂರ್ಣ ತಯಾರಿ ನಡೆದಿದೆ.
ಇದು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದಿರುವ ಮೊಟ್ಟ ಮೊದಲ ವಿಡಿಯೋ ಬುಕ್!! ಎರಡನೇ ಬುಕ್ ಮಾಡಲು ರೆಡಿ ಇದ್ದರೆ ನನಗೆ ತಿಳಿಸಿ.... ಈ ಯೋಜನೆಗೆ ಕೈಜೋಡಿಸಿದ ಎಲ್ಲಾರಿಗೂ ನನ್ನ ಅನಂತಾನಂತ ನಮನ. ಮಿಕ್ಕ ವಿವರಗಳನ್ನು ಇಲ್ಲೇ ಹಾಕುವೆ :)
- Video Book - https://youtu.be/iq-aXVkDKFI
- Main website - www.prakasamtrust.org/ht
- Trailer # 1 - https://youtu.be/Xb86UA8DPNY
- Trailer # 2 - https://youtu.be/K5bS7U0bhR4
- FB Live with Jogi - CLICK HERE
- Readers List - CLICK HERE
- Nalme's Article - https://pdponder.blogspot.com/2020/05/nalme.html
ಕರೋನ ಗಲಾಟೆಯಿಂದ ನಾವೆಲ್ಲಾ ಹೋಲ್ ಸೇಲ್ ಆಗಿ ಮನೆ ಸೇರಿದ್ದು ಈಗಾಗಲೇ ಹಳೇ ಸುದ್ದಿ. ಸೇರಿದಾಗ ಏನು ಮಾಡುವುದು, ದಿನಾ ಇಡೀ ಊರು ಸುತ್ತುತಿದ್ದ ನನ್ನ ತರದವರಿಗೆ ದೊಡ್ಡ ಶಾಪ ಆಯ್ತು ಈ ಲಾಕ್ ಡೌನ್ ಸುದ್ದಿ. ಮಾಡಬೇಕಾದ ಎರಡೂ ನಾಟಕಗಳು ಕ್ಯಾನ್ಸಲ್ ಆಯ್ತು. ಮಾರ್ಚ್ ೨೨ನೇ ತಾರೀಕು ನಾಟಕ ಕ್ಯಾನ್ಸಲ್ ಆದಮೇಲೆ ಏನಾದರೂ ಮಾಡಬೇಕು, ಮನೆಯಲ್ಲಿ ಕುಳಿತು ಜಡಭರತನಾಗುವುದು ನನಗಂತೂ ಇಷ್ಟ ಇರಲಿಲ್ಲ. ಆದರೆ ಇದು ಸಮಾಜಕ್ಕೆ ಸಮಾಜದಿಂದ ಹರಡೋ ವೈರಸ್. ಮನೆಯಲ್ಲಿ ಕುಳಿತು ಏನು ಮಾಡೋಣ ಅಂತ ಯೋಚನೆ ಮಾಡುತ್ತಿದ್ದಾಗ couch potato ಅನ್ನೋ ಒಂದು ಪರಿಕಲ್ಪನೆ ಆಧಾರಿತ ಐಡಿಯಾ ಬಂತು.ಕಲಾವಿದರು ಸ್ನೇಹಿತರಾದಾಗ ಈ ತರಹದ ಕೆಲಸಕ್ಕೆ ಸಿಕ್ಕಾಪಟ್ಟೆ ಅನುಕೂಲ ಆಗುತ್ತೆ. ಎಲ್ಲರೂ ಒಟ್ಟಿಗೆ ಕುಳಿತು ಒಂದೊಂದು ಕಥೆ ಓದಿ ಒಂದು ದೊಡ್ಡ ವಿಡಿಯೋ ಮಾಡೋಣ ಅಂತ ಮನಸಾಯಿತು. ಓದುವುದರ ವಿಡಿಯೋ ಮಾಡಿ ಅದನ್ನು ಎಡಿಟ್ ಮಾಡಿ ಒಂದು ದೊಡ್ಡ ವಿಡಿಯೋ ಮಾಡೋಣ ಅಂತ ನಿರ್ಧರಿಸಿದೆ. ನಂತರದ ಪ್ರಶ್ನೆ ಯಾವ ಪುಸ್ತಕ ಓದುವುದು ಎನ್ನೋದು. ಸಡನ್ನಾಗಿ ಜ್ಞಾಪಕ ಬಂದದ್ದು ಜೋಗಿಯವರ ಲೈಫ್ ಈಸ್ ಬ್ಯೂಟಿಫುಲ್, ನನ್ನ ನಟನಾ ಕಾರ್ಯಾಗಾರಕ್ಕೆ ಈಗಾಗಲೇ ಅದನ್ನು ಬಳಸಿದ್ದರಿಂದ ಅದರಲ್ಲಿದ್ದ ಸಣ್ಣ ಸಣ್ಣ ಯೋಚನೆಗಳ ಹಾಗು ಈಗಿನ ಕಾಲಕ್ಕೆ ತಕ್ಕ ಬರಹ ಆಪ್ಯಾಯವೆನಿಸಿತು.
ಸಾಕಷ್ಟು ಮುಜುಗರದಿಂದಲೇ (ಏನು ಕೇಳಿದರು ಇಲ್ಲ ಅನ್ನೊಲ್ಲ ಅದಕ್ಕೆ) ಜೋಗಿಯವರ ಬಳಿ ವಿಷಯ ಪ್ರಸ್ತಾಪ ಮಾಡಿದೆ. ಅವರು ಹಿಂದೆ ಮುಂದೆ ನೋಡದೆ ಮಾಡಿ ಅದ್ಭುತವಾದ ಯೋಚನೆ ಎಂದು ಹುರಿದುಂಬಿಸಿ ಈ ಪೋಸ್ಟರ್ ಮಾಡಿ ಕೊಟ್ಟರು. ನಾನು ಮಾಡಿದ ಕೆಟ್ಟ ಪೋಸ್ಟರ್ ನೋಡಲು ಇಲ್ಲಿ click ಮಾಡಿ ಹಾಗೆ ಕೆಲಸ ಶುರು ಆದ ತಕ್ಷಣ ಒಂದು ಲೈವ್ ಕೂಡ ಮಾಡಿದೀವಿ. (ಲೈವ್ ವಿಡಿಯೋ ನೋಡಲು ಇಲ್ಲಿ click ಮಾಡಿ) ಬರೋಬರಿ 51 ಜನರನ್ನು ಪಟ್ಟಿ ಮಾಡಿ ಕಲೆ ಹಾಕಿ ಅವರಿಗೆ ಒಂದೊಂದೇ ಕಥೆಯನ್ನು ಕಲಿಸಲು ಆರಂಭಿಸಿದೇ. ಜೋಗಿಯವರ ಮುಖಾಂತರ ಪ್ರತಿ ಕಥೆಯು pdf ಆಗಿ ನನಗೆ ಸಿಕ್ಕಿತು (ಜಮೀಲ್ ರವರಿಗೆ ಧನ್ಯವಾದಗಳು). ಈಗ ಇದು ಇನ್ನೇನು ಮುಗಿದು ಹೊರಬರಲು ತಾಯಾರಿದೆ, ಹಾಗೆ ಎರಡನೇ ಅವತರಿಣಿಕೆಗೆ ಪೂರ್ಣ ತಯಾರಿ ನಡೆದಿದೆ.
ಇದು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದಿರುವ ಮೊಟ್ಟ ಮೊದಲ ವಿಡಿಯೋ ಬುಕ್!! ಎರಡನೇ ಬುಕ್ ಮಾಡಲು ರೆಡಿ ಇದ್ದರೆ ನನಗೆ ತಿಳಿಸಿ.... ಈ ಯೋಜನೆಗೆ ಕೈಜೋಡಿಸಿದ ಎಲ್ಲಾರಿಗೂ ನನ್ನ ಅನಂತಾನಂತ ನಮನ. ಮಿಕ್ಕ ವಿವರಗಳನ್ನು ಇಲ್ಲೇ ಹಾಕುವೆ :)

Comments
Post a Comment
Tell me what you think...