Karanth of Kalakshetra canteen social media for us since late 80s till Facebook came... Fond memories...
ಕಾರಂತರು ನನಗೆ ಕಲಾಕ್ಷೇತ್ರ ಗೊತ್ತಿರೋ ಸಮಯದಿಂದ ಗೊತ್ತಿದಾರೆ. ಇವರು ಕಲಾಕ್ಷೇತ್ರಕ್ಕೆ ರೆಗ್ಯುಲರ್ ಆಗಿ ಬರೋರಿಗೆ ಪರಿಚಯ ಇದ್ದೇ ಇರ್ತಾರೆ. ಮೊದಲು ಕಲಾಕ್ಷೇತ್ರದ ಎಡಭಾಗದಲ್ಲಿ ಇರುವ ಪ್ರವೇಶದ್ವಾರದಲ್ಲಿ ಕ್ಯಾಂಟೀನ್ ಇಟ್ಟಿದ್ರು. ಆಮೇಲೆ
ಈಗ ತಾಲೀಮು ಕೊಠಡಿ ಹತ್ರ ಬಂದಿದಾರೆ. ಸ್ವಲ್ಪ ಹೊಟ್ಟೆ ದೊಡ್ಡದಾಗಿದೆ. ಅಷ್ಟೇ ದೊಡ್ಡ ಮನಸ್ಸು, ಮಗುಗೆ ಇರುವ ಕುತೂಹಲ ಎಲ್ಲ ವಿಷಯದ ಬಗ್ಗೆ. ಕಲಾಕ್ಷೇತ್ರದ ಸ್ಥಳ ಮಹಾತ್ಮೆ ಇವರ ಅಧ್ಯಾಯ ಇಲ್ಲದೆ ಮುಗಿಯೋದಿಲ್ಲ.
ನಾವೆಲ್ಲ ಆಗ ಹದಿಹರೆಯದ ಬಿಸಿ ರಕ್ತದ ಯುವಕರು ಅಲ್ಲ ಪಡ್ಡೆ ಹುಡುಗರು. ಓದು ಅಂತ ಫೀಸ್ ಕಟ್ಟಿ ಕಾಲೇಜ್ ನಲ್ಲಿ ಓದಿ ಉದ್ಧಾರ ಆಗ್ತಿದಾನೆ ಅಂತ ಹೆತ್ತವರು ಅಂದುಕೊಂಡಿರುವಾಗ, ನಾವೆಲ್ಲಾ ಕಾರಂತರ ಜೊತೆ ಅವನು ಬಂದಿದ್ನಾ? ಈ ಕವರ್ ಅವನಿಗೆ ಕೊಟ್ಟುಬಿಡಿ, ಅವನು ಬಂದ್ರೆ ನಾನು ಮನೆಗೆ ಹೋದೆ ಅಂತ ಹೇಳಿ ಇತ್ಯಾದಿ ಮೆಸೇಜ್ ಬಿಡೋ ವಾಟ್ಸಾಪ್ ಆಗಿದ್ರು. ರೀ ನಿಮಗೆ ಗೊತ್ತಾ ಅವನು ಆ ನಾಟಕ ಅಥವಾ ತಂಡ ಬಿಟ್ಟ ಇತ್ಯಾದಿ ಬ್ರೇಕಿಂಗ್ ನ್ಯೂಸ್ ಕೊಡ್ತಿದ್ದ ಟ್ವಿಟ್ಟರ್ ಆಗ್ತಿದ್ರು, ನೋಡಿ ಈ ನಾಟಕ ನಮ್ಮ ಕಡೆಯವರದ್ದು ಅಂತ ಜಾಹೀರಾತು ನೀಡುವ ಫೇಸ್ಬುಕ್ ಆಗಿದ್ರು... ಕೈಸಾಲ ಕೊಡುವ paytm ಆಗಿದ್ರು... ನಮ್ಮಿಂದ ಅಥವಾ ನಮ್ಮ ದುಡ್ಡು ಬೇರೆಯವರಿಂದ ಹಸ್ತಾಂತರ ಮಾಡುವ online ಬ್ಯಾಂಕ್ ಆಗಿದ್ರು... ನಾವು ಪಾಪ ಅಕೌಂಟ್ ಇತ್ತು ಸುಮಾರ್ ಯಾಮಾರ್ಸಿದೀವಿ ಇವರನ್ನ... ಆದ್ರೂ ಇವತ್ತೂ ಕೂಡ ಅದೇ ಸ್ನೇಹದಿಂದ ಮಾತಾಡಿಸ್ತಾರೆ, ಹೋಗಿ ಕಲಾಕ್ಷೇತ್ರಕ್ಕೆ, ಕ್ಯಾಂಟೀನ್ ನಲ್ಲಿ ಅರ್ಧ ಟೀ ತೊಗೊಂಡು ಉಭಯಕುಶಲೋಪರಿ ಮಾಡಿ ಬನ್ನಿ...

Comments
Post a Comment
Tell me what you think...