Skip to main content

ನಾನೂ ನನ್ನ ಕನ್ನಡವೂ ಮತ್ತು ಇಂಗ್ಲೀಷು


ಕನ್ನಡ ಉಳಿಸಲು ಕನ್ನಡ ಬಳಸಿ, ಇದು ನಾನು ನನ್ನ ಎಲ್ಲಾ ಕನ್ನಡ ಬಂಧು ಬಾಂಧವರಿಗೆ ಯಾವಾಗಲೂ ಹೇಳುವ ಡೈಲಾಗ್.  ನನ್ನ ಹಾಗು ಕನ್ನಡದ ಸಣ್ಣ ಕಥೆ ಇಲ್ಲಿದೆ... ಓದಿ ಹೇಳಿ ಹೇಗಿದೆ... (ಹೇಗಿದೆ ಪ್ರಾಸ) 
ನಮ್ಮಲ್ಲಿ ಭಾಷೆಗಳು ಹಲವು ಆದರೂ ಭಾರತೀಯತೆ ಎಲ್ಲವನ್ನೂ ಮೆಟ್ಟಿನಿಲ್ಲುವಂತೆ “ಯೂನಿಟಿ ಇನ್ ಡೈವರ್ಸಿಟಿ” ನಮ್ಮ ಸುತ್ತ ಮುತ್ತಲಿನ ಭಾಷೆಗಳನ್ನು ನಮಗೆ ಕಲಿಸುತ್ತವೆ.  ಮನುಷ್ಯನು ಒಬ್ಬ ಸಂಘಜೀವಿ, ಅವನ ಈ ಸಂಘಜೀವನದ ಆಸೆಯು ಅವನನ್ನು ಮೂಕೀ ಭಾಷೆಯಿಂದ ಮಾತನಾಡುವ ಭಾಷೆಯತ್ತ ತಂದು ನಿಲ್ಲಿಸಿದೆ.  ಸಂವಹನದ ಕೊಂಡಿಯಾಗಿರುವ ಈ ಭಾಷೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿದೆ.  ಭಾಷೆ ಏನಾದರೂ ಇರಲಿ ಮಾತಾಡದೇ ಯಾರೂ ಬದುಕಿರುಲು ಅಸಾಧ್ಯವಾಗಿರುವಾಗ ನಮ್ಮ ದೇಶದಂಥಹ ವಿಭಿನ್ನ ಭಾಷೆಗಳ ಸಮಾಗಮದ ಸಮಾಜದಲ್ಲಿ ತಿಳಿಯದ ಭಾಷೆಯವರ ಜೊತೆಯೂ ಹೇಗಾದರೂ ಮಾತನಾಡುವ ತವಕವಿರುತ್ತದೆ.



Image result for kannada ulisi kannada belesiನಾನು ಮೊದಲಬಾರಿಗೆ ಬೆಂಗಳೂರನ್ನು ಬಿಟ್ಟು ಬೇರೇ ರಾಜ್ಯಕ್ಕೆ ಹೋಗಿದ್ದೆಂದರೆ ಅದು ಕೇರಳಾಗೆ, ನಮ್ಮ ದೊಡ್ಡಪ್ಪ ಅಲ್ಲಿನ ಇಸ್ರೋ ಕೇಂದ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು.  ಅಲ್ಲಿ ನನಗೆ ಮೊದಲಬಾರಿ ಒಂದು ಏಲಿಯನ್ ಅನುಭವವಾಯ್ತು.  ನನಗಾಗ ಏಳು ವರ್ಷ, ಪ್ರಪಂಚದಲ್ಲಿ ಇಂಗ್ಲಿಷ್ ನಮ್ಮ ದೇಶದಲ್ಲಿ ಹಿಂದಿ ಬಿಟ್ಟರೆ ಕನ್ನಡವೊಂದೇ ಭಾಷೆ ಎಂದು ನಂಬಿದ್ದ ಕನ್ನಡಾ ಮೀಡಿಯಂ ವಿಧ್ಯಾರ್ಥಿಗೆ ದೊಡ್ಡ ಆಘಾತವಾಯ್ತು.   ಇಂಗ್ಲಿಷ್ ಪರಿಚಯವಾದಾಗ ಅದೊಂದು ಎಲ್ಲಾರೂ ಮಾತಾಡೋ ಭಾಷೆ ನಾನು ಮಾತಾಡದಿದ್ದರೂ ಪರವಾಗಿಲ್ಲ, ಸ್ವಲ್ಲ ಕಷ್ಟವದರೂ ಸರಿ, ರಾಷ್ಟ್ರ ಭಾಷೆ ಎಂದು ನಂಬಿದ್ದ ಹಿಂದಿ ಕಲಿಯೋದು ಅಂತ ಮನಸ್ಸು ಮಾಡಿದ್ದೆ.  ಇದೇನಿದು ಮಲೆಯಾಳಂ ಎಂದು ಅರಿವಾದಾಗ ತಬ್ಬಿಬ್ಬಾದೆ.  ಸೋಂಬೆರಿತನದ ಜೊತೆಗೆ ಹೆದರಿಕೆ ಮಿಕ್ಸ್ ಆಗಿ ನಾನು ತೆಪ್ಪಗಾದೆ.  ಆದರೆ ನನ್ನ ಅದ್ರುಷ್ಟ ನಮ್ಮ್ ಶಾಲೆಗೊಬ್ಬ ಹೊಸಾ ದೈಹಿಕ ಶಿಕ್ಷಕ ಬಂದ ಆತನೊಬ್ಬ ತಮಿಳಿನವ.  ಅವನ ಬಾಯಿನಲ್ಲಿ ಕನ್ನಡ ಕೇಳಿ ಹೀಗೂ ಮಾತನಾಡಬಹುದೆ ಎಂದು ಆಶ್ಚರ್ಯಚಕಿತನಾದೆ.  ನನಗೆ ೧೦ ವರ್ಷತುಂಬುವುದರೊಳಗೆ ಭಾರತದಲ್ಲಿ ಇರುವ ಭಾಷಾ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಇಲ್ಲ ಎಂಬುವುದರ ಅರಿವಾಗಿದ್ದು.

ನಂತರ ಹೈಸ್ಕೂಲಿನಲ್ಲಿ ನನಗೆ ನನ್ನ ಪೂರ್ತಿ ಪೀಳಿಗೆ "ಅನುಭವಿಸಿದ" ಇಂಗ್ಲೀಶ್ ಮೀಡಿಯಂನ ಹೇರಲಾಯ್ತು.  ಯಾವ ಭಾಷೆಯನ್ನು ನನ್ನ ಇಡಿ ಜನರೇಶನ್ ಪಿತ್ರುಭಾಷೆ ಎಂದು ಸ್ವೀಕರಿಸುತ್ತಿತ್ತೋ ಅದನ್ನು ನಾನು ದ್ವೇಷಿಸತೊಡಗಿದೆ.  ಅದರಲ್ಲಿನ ವ್ಯಾಕರಣ ಕಾಗುಣಿತ ಇತ್ಯಾದಿ ನನ್ನನ್ನು ತಬ್ಬಿಬ್ಬು ಮಾಡಿತು.  ಕನ್ನಡ ಭಾಷೆಯ ಯಾವುದೇ ಲಾಜಿಕ್ ಇಂಗ್ಲೀಷ್ ನಲ್ಲಿ ಇಲ್ಲ. ಕನ್ನಡದ ವೈವಿಧ್ಯತೆ ಕೂಡಾ ಇರಲಿಲ್ಲ, ಆದರೆ ಅದು ನಮ್ಮ ಮನೆಯ ಎಲ್ಲಾ ಹಿರಿಯರ ಪ್ರಕಾರ ಇಂಗ್ಲೀಷ್ ಓದದಿದ್ದಲ್ಲಿ ನನಗೆ ನಮ್ಮ ಸೂಪರ್ ಎಜ್ಯುಕೇಟೆಡ್ ಸಂಸಾರದಲ್ಲಿ ಸ್ಥಾನವಿಲ್ಲ ಅನ್ನೋದನ್ನ ಎಲ್ಲರೂ ಅರ್ಥವಾದರೂ ಇನ್ನೂ ನೂರುಬಾರಿ ಅರ್ಥ ಮಾಡಿಸಿದ್ದರು. ಆದರೂ ಹೈಸ್ಕೂಲ್ ಮುಗಿಯುವ ವರೆಗು ಇಂಗ್ಲೀಷ್ ಕಬ್ಬಿಣದ ಕಡಲೆಯಾಯ್ತು.  ಏಳನೇ ತರಗತಿಯವರೆಗು ಅದ್ಭುತ ವಿಧ್ಯಾರ್ತಿಯಾಗಿದ್ದ ಸತೀಶ ಅವನ ಜೀವನದಲ್ಲಿ ಮೊದಲಬಾರಿ ಥರ್ಡ್ ಕ್ಲಾಸನಲ್ಲಿ ಎಂಟನೇ ತರಗತಿಯನ್ನು ಪಾಸ್ ಮಾಡಿದ.  ನಮ್ಮ ಮನೆಯಲ್ಲಿ ನಾನೊಬ್ಬ ಹೊಲೆಮಾದಿಗನಾದೆ ಎಲ್ಲರೂ ನನ್ನನ್ನೊಬ್ಬ ಅಸ್ಪರ್ಶನ್ನಾಗಿ ನೋಡಿದರು, ಕಾಡಿದರು, ಬೈದರು ಮತ್ತು ಹೊಡೆದರು.  ಕನ್ನಡವನ್ನು ಹೆಚ್ಚು ಪ್ರೀತಿ ಮಾಡಲು ಹಾಗೂ ಇಂಗ್ಲಿಷ್ ಭಾಷೆಯನ್ನು ದ್ವೇಶಿಸಲು ಇದು ದೊಡ್ಡ ಕಾರಣವಾಯಿತು.  ಇಂಗ್ಲಿಷ್ ನನ್ನ ಪಾಲಿಗೆ ನುಂಗಲಾರದ ತುತ್ತಾಯ್ತು ರಾತ್ರಿ ನಿದ್ದೆ ಕೆಡಿಸ್ತು ಮನಸ್ಸಿನ ನೆಮ್ಮದಿ ಮೊದಲಬಾರಿಗೆ ಹಾಳಾಯ್ತು.  ನನಗೆ ಇಂಗ್ಲಿಷ್ ಮೇಲೆ ವ್ಯಾಮೋಹ ಬರುವುದು ಅಸಾಧ್ಯವಾದ ಕಾರ್ಯ ಎನ್ನುವುದು ನಮ್ಮ ಮನೆಯವರಿಗು ಮತ್ತು ನನಗೂ ಖಾತ್ರಿಯಾತು.

ನನ್ನ ಕೆಲ ಸಹಪಾಟಿಗಳು ಕಾನ್ವೆಂಟ್ ನಲ್ಲಿ ಓದಿ ಇಂಗ್ಲೀಷ್ ಭಾಷೆಯ ಪಂಟರ್ ಗಳಾಗಿದ್ದರು.  ಅವರನ್ನು ನೋಡಿ ಕಲಿ ಎಂದು ಮನೆಯಲ್ಲಿ ತಾಕೀತು, ಹಾಗೆ ಆ ವಯಸ್ಸಿಗೆ ಸಹಜವಾದ ಹೆಣ್ಣು ಜಾತಿಗೆ ಸೇರಿದ ಸಹಪಾಟಿಗಳ ಒಲವು ನೈಸರ್ಗಿಕವಾಗಿ ಇಂಗ್ಲಿಷ್ ಅರಿತವರ ಕಡೆ ವಾಲುವುದನ್ನು ಗಮನಿಸಿದ್ದು ನಾನೊಬ್ಬನೇ ಅಲ್ಲ, ಎಲ್ಲಾ ಕನ್ನಡಾ ಮೀಡಿಯಂ ಸಹಪಾಟಿಗಳು.  ಆಗ ನನಗೆ ಇಂಗ್ಲಿಷ್ ಬೇಕು ಎಂದು ಮೊದಲಬಾರಿ ಅನಿಸಿದ್ದು.  ಆದರೆ ಆಸೆಯು ಹೈಸ್ಕೂಲ್ ಮುಗಿಯುವವರೆಗೂ ಕನಸ್ಸಾಗಿಯೇ ಉಳಿಯಿತು. 

ನಂತರ ಬಂತು ನನ್ನ ಭಾಷಾ ಪಯಣದಲ್ಲಿ ಹೊಸ ತಿರುವು.  ಪಿಯೂಸಿಯಲ್ಲಿ ನನಗೆ ಅದ್ಬುತವಾದ ಇಂಗ್ಲೀಷ್ ಟೀಚರ್ ಗಳು.  ಇಬ್ಬರು ಅತಿ ಸುಂದರವಾದ ಮೇಡಂಗಳು ಹಾಗೂ ಒಬ್ಬ ನಮ್ಮಂಥಃ ಕನ್ನಡಾ ಮೀಡಿಯಂ ಸ್ಕೂಲಿನ ವಿದ್ಯಾರ್ಥಿಗಳ ಪಾಡನ್ನು ಅರಿತುಕೊಂಡಿದ್ದ ಸರ್ ಒಬ್ಬರು.  ಆ ಇಬ್ಬರು ಮೇಡಂಗಳ ಒಂದೂ ಪಾಠವನ್ನು ಎಂದೂ ಬಿಡದೆ ಕೇಳುತ್ತಿದ್ದೆ.  ಅವರ ಬಾಯಿನಿಂದ ಇಂಗ್ಲಿಷ್ ಭಾಷೆ ಹೊರಬರುವುದನ್ನು ನೋಡುವುದೇ ಒಂದು ಗೀಳಾಗಿತ್ತು. ಈ ನ್ಯಾಷನಲ್ ಕಾಲೇಜ್ ನಮ್ಮ ಯೂನಿಫಾರಂ ಧರಿಸಿ ಸ್ಕೂಲಿನಲ್ಲಿ ಇದ್ದ ರೆಜಿಮೆಂಟ್ ಮಾದರಿಯಿಂದ ಇದ್ದಕ್ಕಿದ್ದಂತೆ ಸ್ವಾತಂತ್ರ್ಯ ಸಿಕ್ಕಿದ ಪಕ್ಷಿಯಾಗಿದ್ದ್ವಿ ನಾವೆಲ್ಲಾ.  ಈ ಸ್ವಾತಂತ್ರ್ಯ ನಮಗೆ ಸ್ಚೇಚ್ಚೆ ಕೂಡ ಕಲಿಸಿತು.  ಅದರೊಂದಿಗೆ ಕಲರ್ ಕಲರ್ ಡ್ರೆಸ್ ಧರಿಸಿ ಕಲರ್ ಕಲರ್ ಆಗಿ ಬರ್ತಿರೋ ಹುಡುಗಿಯರು ಬೇರೆ.  ಇಂಗ್ಲಿಷ್ ಆಪ್ಯಾಯಮಾನವಾಗಿ ಅತಿ ಸುಲಭವಾಗಿ ಒಲಿಯತೊಡಗಿತು.  ಜೊತೆಗೆ ತಮಿಳು ತೆಲುಗು ಹಿಂದಿ ಕೂಡ ಒಲಿಯತೊಡಗಿತು.  ವಾರಕ್ಕೊಂದು ಪರಭಾಷಾ ಚಲನಚಿತ್ರದ ಗೀಳು. ಈ ಸಮಯದಲ್ಲಿ ನಮ್ಮ ಸೊದರಮಾವ ಒಬ್ಬರು ಹಾಲೀವುಡ್ ಚಿತ್ರಗಳ ಅಭಿಮಾನಿ, ಅವರು ನಮಗೆ ಹೇಳಿಕೊಟ್ಟ ಪಾಠ ಇಂಗ್ಲೀಷ್ ಫಿಲಂನಲ್ಲಿ ಕಲಿಯುವ ಇಂಗ್ಲಿಷ್ ಕ್ಲಾಸ್ ರೂಂನಲ್ಲಿ ಕಲಿಯೋ ಇಂಗ್ಲಿಷ್ ಗಿನ್ನ ವಾಸಿ, ಏಕೆಂದರೆ ನಿಮ್ಮ ಟೀಚರ್ ದು ಇಂಡಿಯನ್ ಆಕ್ಸೆಂಟ್ ಇವರ್ದು ಒರಿಜಿನಲ್ ಆಕ್ಸೆಂಟ್ ಅಮೇರಿಕನ್ ಆಕ್ಸೆಂಟ್ ಮತ್ತು ಬ್ರಿಟಿಷ್ ಇತ್ಯಾದಿಗಳು ಅರಿವಾದವು. ಅದೇ ನಮ್ಮ ಕನ್ನಡ ಭಾಷೆನಲ್ಲೂ ಮಂಗಳೂರಿನದು ಹುಬ್ಬಳ್ಳಿ ಯದು ಆಕ್ಸೆಂಟ್ ಇದೆಯೆಂದು ನಮ್ಮ ಕನ್ನಡದ ಮೇಲೆ ಹೆಮ್ಮೆ ಹೆಚ್ಚಾಯ್ತು.  ನಮ್ಮ ಭಾಷೆ ಬೇರೆ ಎಲ್ಲಾ ಭಾಷೆಗಳಿಗಿಂತ ಹೆಚ್ಚು ಹಿರಿಮೆ ಉಳ್ಳದ್ದು ಅಂತಲೂ ಅರಿವಾಯ್ತು.  ಅಷ್ಟರಲ್ಲಿ ಮಹಿಳಾ ಮಣಿಗಳು ಮಾತೃಭಾಷೆಗಿಂತ ಹೆಚ್ಚು ಸಮಯ ಹಾಗೂ ಸ್ಥಳವನ್ನು ಆಕ್ರಮಿಸಲು ಪ್ರಾರಂಬಿಸಿದರು. ಕನ್ನಡ ಹಾಗು ಕಣ್ಮಣಿಗಳ ನಡುವೆ ಹೋಯ್ದಾಟಾ ಪ್ರಾರಂಭವಾಯ್ತು.  ಆದರೂ ವಯಸ್ಸಿಗನುಗುಣವಾಗಿ ನನ್ನ ಸಮಕಾಲೀನ ಮನೋಭಾವದಲ್ಲಿ ನಾನು ಪಡೆದುಕೊಳ್ಳುತ್ತಿದ್ದ ಹೆಂಗಳೆಯರ ಗಮನ ನನ್ನನ್ನೊಬ್ಬ ಇಂಗ್ಲೀಷ್ ಆರಾಧಕನನ್ನಾಗಿಸಿತು.

ಇದೇ ಸಮಯದಲ್ಲಿ ನನ್ನ ಗೆಳತಿಯೊಬ್ಬಳು ನನ್ನ ಕುರುಡು ಅನುಕರಣಿಕೆಯ ಕೆಟ್ಟ ಅವತಾರದ ಸರಿಯಾದ ದರ್ಶನವನ್ನು ಮಾಡಿಸಿದಳು, ನಾನು ಕಂಡು ಕೇಳಿರದ ಹೆಸರುಗಳಾದ ಸಂಸ, ಕೈಲಾಸಂ, ಮಾಸ್ತಿ, ಡಿವಿಜಿ ಇವರುಗಳ ಪುಸ್ತಕ ಪರಿಚಯ ಮಾಡಿಸಿದಳು.  ಬರೀ ಹೆಸರನ್ನು ಕೇಳಿದ್ದ ನನಗೆ ಇದ್ದಕ್ಕಿದ್ದಂತೆ ಅವರ ಬರಹದ ಪರಿಚಯವಾಯಿತು.  ಕನ್ನಡದ ಸಾಹಿತ್ಯಕ ಅರಿವಿಲ್ಲದೆ ಭಾಷೆಯನ್ನು ಅರಿಯಲಗುವುದಿಲ್ಲ ಎನ್ನುವುದು ಮನದಟ್ಟಾದಂತೆ ಓದುವುದು ಹೆಚ್ಚಾಗುತ್ತಾ ಹೋಯಿತು.  ಬೇರೇ ಭಾಷೆಗಳ ಕನ್ನಡ ಹಾಗೂ ಇಂಗ್ಲಿಷ್ ಅನುವಾದಗಳನ್ನು ಓದುವುದು ಹಿತವೆನ್ನಿಸತೊಡಗಿತು.  ಎಲ್ಲಾ ಭಾಷೆಗಳು ನನ್ನ ಭಾಷೆ ಎನ್ನುವುದು ಅರಿವಾಗುತ್ತಾ ಹೋಯ್ತು.

ಕೆಲಸಕ್ಕೆ ಎಂದು ಖಾಸಗೀ ಎಫ್ ಎಂ ಒಂದಕ್ಕೆ ಸೇರಿದಾಗ ಭಾಷೆಯ ಇನ್ನೊಂದು ಮಜಲು ನನ್ನ ಅರಿವಿಗೆ ಬಂದಿತು.  ಓದು ಭಾಷೆ ಮತ್ತು ಆಡು ಭಾಷೆಯಲ್ಲದೆ ಇನ್ನೊಂದು ವ್ಯಾವಹಾರಿಕ ಭಾಷೆ ಅಸ್ಥಿತ್ವಕ್ಕೆ ಬಂದಿದೆಯೆಂದು.  ಅದಕ್ಕೆ ಯಾವುದೇಆದ ನಿರ್ಭಂಧನೆಗಳಿಲ್ಲ, ಹಿಡಿತಗಳಿಲ್ಲ, ಹಾಗೂ ಚರಿತ್ರೆ ಕೂಡಾ ಇಲ್ಲಾ.  ಡಬಲ್ ಮೀನಿಂಗ್ ಸಂಪ್ರದಾಯ ವ್ಯಾವಹಾರಿಕ ಭಾಷೆಯಲ್ಲಿ ಹಾಸು ಹೊಕ್ಕಾಗಿತ್ತು.  ದಿನಬಳಕೆ ಪದಗಳಿಗೆ ಎರಡು ಮೂರು ಅರ್ಥಗಳು ಇವೆ ಎಂಬ ಸಂಗತಿ ನನಗೆ ತಿಳಿಯಿತು.  ಇಡು ಎಂಬ ಓದು ಭಾಷೆಯ ಪದ, ಇಕ್ಕು ಎಂಬ ಆಡು/ಗ್ರಾಮ್ಯ ಭಾಷೆಯ ಪದದ ಬಳಕೆ, ಅದರ ಮೂಲಾರ್ಥಕ್ಕಿಂತ ಸಂಭೊಗ ಕ್ರಿಯೆಗೆ ಹೆಚ್ಚು ಬಳಕೆಯಾಗುತ್ತಿದೆ ಎಂದು.  ಹಾಗೇ ಅನೇಕ ಕನ್ನಡ ಪದಗಳ ಬಳಕೆ ನಿಂತು ಜನರು ಅದರ ಅರ್ಥವನ್ನು ತಿಳಿಯದ ಮಟ್ಟಿಗೆ ವ್ಯಾವಹಾರಿಕ ಭಾಷೆಯ ದಾಸರಾಗಿದ್ದಾರೆ ಎಂಬ ಕಟುಸತ್ಯವು ಮುಂದೆಬಂದಿತು.  ಸಸೇಷ, ನಿರ್ಲಿಪ್ತ, ಪಥ, ಕೂಟ, ಪ್ರವಚನ ಇತ್ಯಾದಿ ಪದಗಳನ್ನು ಇಂದಿನ ಬೆಂಗಳೂರಿನ ಕನ್ನಡ ಮನೆಯ ಮಕ್ಕಳು ಎಂದೂ ಬಳಸೇ ಇಲ್ಲ ಎನ್ನುವುದು ವಿಪರ್ಯಾಸ.  ನನ್ನ ಜನರೇಷನ್ ಕಾಲದಲ್ಲಿ ಪ್ರಾರಂಭವಾದ ಇಂಗ್ಲಿಷ್ ಭಾಷೆಯ ಅಂಧಾನುಕರಣೆ ಈಗ ಪರಮಾವಧಿಗೆ ಸೇರಿ ಈ ಕನ್ನಡ ಅನ್ನೋ ಭಾಷೆಯನ್ನು ಬಳಸುವ ಉಳಿಸುವ ಕಾರ್ಯವು ನಡೆಯಲೇ ಬೇಕಾದಂಥ ಕಾಲಘಟ್ಟಕ್ಕೆ ನಾವು ತಲುಪಿದ್ದೇವೆ.

ಇನ್ನೂ ತಡವಾಗಿಲ್ಲ, ಕನ್ನಡವನ್ನ ಉಳಿಸಿ ಬೆಳಸೋದು ನಮ್ಮ ನಿಮ್ಮ ಕೈನಲ್ಲಿ ಅಲ್ಲ ಬಾಯಿನಲ್ಲಿ ಇದೆ ಅನ್ನೋದು ಅರಿವಾದಲ್ಲಿ ಭಾಷೆ ಉಳಿಯೋದಷ್ಟೇ ಅಲ್ಲ, ಬೆಳೆಯುವುದು ಕೂಡ.

ಕನ್ನಡವೇ ಸತ್ಯವಾಗಲು, ಕನ್ನಡವೇ ನಿತ್ಯವಾಗಬೇಕು. 

Comments

Popular posts from this blog

ಸಂವಿ ಹೇಳಿಕೊಟ್ಟ ಪಾಠಗಳು | Tribute to Sanchari Vijay

ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ. ಸಂವಿ ಹೇಳಿಕೊಟ್ಟ ಪಾಠಗಳು ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ.  ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ.  ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ...

I The Revenant!! (I live to tell the tale)

I really have no idea what to title this, tryst with destiny, final minutes, death at doorstep, light after darkness, reincarnation, second life, how I cheated death, My Life = 1300 Rs, I The Revenant, Sea rescue... But I am sure why I am writing this, I do not want to forget anything which happened on this day. It was early hours of Sunday, December 18, 2016, day after we had Mahpeede Mahablu show in Baindur.  We wanted to go to the beach till sun rises, come back get ready and leave to Bangalore at any cost before 10 AM after breakfast at 9 AM.  So we slept late, since we were in the same beach till 11 PM.  We went in at around 6.30 AM and tried to get into the sea at point 2 in the image below.  Later we realised that the current here is too much of the Sumana or Baindur river, force of the river was enough to make the sea water less salty.  This is clear sign that the current is super strong.  Looking for a suitable location, we moved to location...

Readers in Home Theatre 1

ಹೋಮ್ ಥೀಯೇಟರ್ ಒಂದನೇ ಪುಸ್ತಕದ ಅಧ್ಯಾಯಗಳು ಮತ್ತು ಅದನ್ನು ಓದಿದವರು. ಎಲ್ಲರಿಗೂ ನಮ್ಮ ಧನ್ಯವಾದಗಳು. Video Index: 1 ಜೋಗಿ - ದಯವಿಟ್ಟು ಈ ಪುಸ್ತಕ ಓದಬೇಡಿ - 0:12 2 ಟಿಏನ್ ಸೀತಾರಾಮ್ - ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ - 3:26 3 ಭಾವನಾ - ಒಂದು ಪ್ರೇಮದ ಕಥೆ - 7:14 4 ರಿಷಬ್ ಶೆಟ್ಟಿ - ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? - 11:09 5 ಸುಮನ್ ನಗರ್ಕರ್ - ಲೈಫ್ಒಂದು ಪಾಸ್‍ವರ್ಡು - 13:21 6 ರಿಷಿ - ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ - 16:28 7 ರಾಧಿಕಾ ನಾರಾಯಣ್ - ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? - 19:54 8 ವಸಿಷ್ಠ ಸಿಂಹ - ಲ್ಯಾಪ್ಟಾಪ್ ಮತ್ತು ಪ್ರೀತಿ! - 21:54 9 ಹರ್ಷಿಕಾ ಪೂಣಚ್ಚ - ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! - 23:47 10 ಪ್ರಮೋದ್ ಶೆಟ್ಟಿ - ಎಲ್ಲಾ ಮರೆತು ಚಪ್ಪಾಳೆ ತಟ್ಟಿ - 26:11 11 ಸಂಯುಕ್ತ ಹೊರನಾಡ್ - ಸೀಟ್ ಫಿಲಾಸಫಿ - 29:08 12 ಸಿಹಿ ಕಹಿ ಚಂದ್ರು - ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ - 31:48 13 ಮಂಡ್ಯ ರಮೇಶ್ - ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! - 41:58 14 ರಾಜೇಂದ್ರ ಕಾರಂತ - ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? - 45:08 15 ಸಂಚಾರಿ ವಿಜಯ್ - ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ...